ರಾಜು ಭರತನ್ (೧೯೩೪- ಫೆಬ್ರವರಿ ೭, ೨೦೨೦) ಭಾರತೀಯ ಕ್ರಿಕೆಟ್ ಮತ್ತು ಬಾಲಿವುಡ್ ಸಂಗೀತದ ಕುರಿತು ವರದಿ ಮಾಡುವ ಪತ್ರಕರ್ತ ಮತ್ತು ಬರಹಗಾರ. ಇವರು ವಾರಪತ್ರಿಕೆಯಾದ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮತ್ತು ಭಾರತೀಯ ಚಲನಚಿತ್ರಗಳ ವಾರಪತ್ರಿಕೆ, ಸ್ಕ್ರೀನ್‌ ಗಳಿಗಾಗಿ ಕೆಲಸ ಮಾಡಿದ್ದಾರೆ. ಇವರು ದಿ ವಿಕ್ಟರಿ ಸ್ಟೋರಿ (೧೯೭೪) ಎಂಬ ಭಾರತೀಯ ಕ್ರಿಕೆಟ್ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. ಇವರು ದೀರ್ಘಕಾಲದ ಅನಾರೋಗ್ಯದ ನಂತರ ಫೆಬ್ರವರಿ ೨೦೨೦ ರಲ್ಲಿ ಮುಂಬೈನಲ್ಲಿ ತಮ್ಮ ೮೬ ನೇ ವಯಸ್ಸಿನಲ್ಲಿ ನಿಧನರಾದರು. ಅವರ ಪತ್ನಿ ಗಿರಿಜಾ ರಾಜೇಂದ್ರನ್ ಕೂಡ ಸಿನಿಮಾ ಪತ್ರಕರ್ತೆ. == ಪುಸ್ತಕಗಳು == ಕ್ರಿಕೆಟ್ ಮತ್ತು ಹಿಂದಿ ಚಲನಚಿತ್ರ ಸಂಗೀತದ ವ್ಯಕ್ತಿಗಳೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದ ಭರತನ್ ಅವರು ಅವರ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಆಶಾ ಭೋಂಸ್ಲೆ: ಅ ಮ್ಯೂಸಿಕಲ್ ಬೈಯೋಗ್ರಾಫಿ (: ; (೫ ೨೦೧೬) 978-9385827150) ನೌಷಾದ್‌ನಾಮ: ದ ಲೈಫ್ ಆಂಡ್ ಮ್ಯೂಸಿಕ್ ಆಫ್ ನೌಷಾದ್ (: (೨೦೧೪) 978-9381431931) ಎ ಜರ್ನಿ ಡೌನ್ ಮೆಲೊಡಿ ಲೇನ್ (: (೧ ೨೦೧೦) . ) ಲತಾ ಮಂಗೇಶ್ಕರ್: ಅ ಬಯೋಗ್ರಫಿ (: (೨ ೧೯೯೫) 978-8174760234 ಇಂಡಿಯನ್ ಕ್ರಿಕೆಟ್: ದ ವೈಟಲ್ ಫೇಸ್ ( , ೧೯೭೭) ರೈವಲ್ಸ್ ಇನ್ ದ ಸನ್:ಅ ಸರ್ವೇ ಆಫ್ ದ ೧೯೫೨ ಟೂರ್ ಆಫ್ ಇಂಗ್ಲೆಂಡ್ (: , ೧೯೫೨) == ಉಲ್ಲೇಖಗಳು ==